ಪ್ರಪಂಚದ ಏಳು ಅದ್ಭುತಗಳು ನೀವು ನೋಡಿರುತ್ತೀರಿ ಆದರೆ ನಮ್ಮ ಕರ್ನಾಟಕದಲ್ಲಿರುವ ಏಳು ಅದ್ಭುತಗಳನ್ನು ನಿಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ನೀವೊಬ್ರೆ ಅಲ್ಲ ನಿಮ್ಮ ಕುಟುಂಬದ ಸಮೇತ ನೋಡಬೇಕು ಅವುಗಳು ಯಾವುದೆಂದರೆ.
ಹಿರೇಬೆಣಕಲ್

ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಒಂದು ಅದ್ಭುತವಾಗಿದೆ ಈ ಸ್ಥಳದಲ್ಲಿ ಬೃಹತ್ ಕಲ್ಲಿನ ಶಿಲೆಗಳ ತಾಣವಾಗಿದೆ. ಈ ಸ್ಥಳವನ್ನು ಕ್ರಿಸ್ತಪೂರ್ವ 800 ರಿಂದ ಕ್ರಿಸ್ತಪೂರ್ವ 200 ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು.
ಈ ಸ್ಥಳವು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಈ ಸ್ಥಳವು ಗಂಗಾವತಿ ನಗರದಿಂದ 10 ಕಿ.ಮೀ ಇದೆ ಮತ್ತು ಕೊಪ್ಪಳ ನಗರದಿಂದ 43 ಕಿಲೋಮೀಟರ್ ದೂರವಿದೆ. ಈ ಹಿರೇ ಬಣಕಲ್ ನಲ್ಲಿ ಸುಮಾರು 300 ರಿಂದ 400 ಕ್ಕು ಹೆಚ್ಚು ಶಿಲಾಕೃತಿಯಲ್ಲಿರುವ ಗೋರಿಗಳಿವೆ. ಈ ಸ್ಮಾರಕಗಳನ್ನು ನವಶೀಲಾಯುಗ ಹಾಗೂ ಕಬ್ಬಿಣದ ಶಿಲಾಯುಗದ ನಡುವಿನ ಪರಿವರ್ತನೆಯ ಕಾಲವೆಂದು ಇತಿಹಾಸಕಾರರು ಹೇಳಿದ್ದಾರೆ.
- ಈ ಸ್ಥಳವನ್ನು ಏಳು ಬೆಟ್ಟಗಳ ಜಾಗವೆಂದು ಸಹ ಕರೆಯುತ್ತಾರೆ.
- ಈ ಸ್ಥಳ ಇರುವ ಗುಡ್ಡದ ಹೆಸರು ಮೋರ್ಯಾರ್ ಗುಡ್ಡ ಎಂದು ಸಹ ಕರೆಯುತ್ತಾರೆ.
- 1955 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಧಾರವಾಡ ವೃತ್ತದ ನಿರ್ವಹಣೆಯ ಅಡಿಯಲ್ಲಿದೆ.
- 26 ಫೆಬ್ರವರಿ 2023 ರಂದು ಈ ತಾಣವನ್ನು ಕರ್ನಾಟಕದ ಅದ್ಭುತಗಳಲ್ಲಿ ಒಂದು ಎಂದು ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿಕೊಂಡಿದೆ.
Table of Contents
ಹಂಪಿ

ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಹಂಪಿ ಒಂದು ಆಗಿದೆ . ಅಲ್ಲದೆ ಯುನೆಸ್ಕೋ ವಿಶ್ವ ಪಾರಂಪರೆ ತಾಣಗಳಲ್ಲಿ ಒಂದಾಗಿದೆ. ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದೆ. ಹಂಪಿಯು 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
ಹಂಪಿಯ ಮೊದಲ ಹೆಸರು “ಪಂಪಾ” ಎಂದಾಗಿತ್ತು. ಇದನ್ನು ವರ್ಷಗಳು ಕಳೆದಂತೆ ವಿಜಯನಗರ ಮತ್ತು ವಿರೂಪಾಕ್ಷಪುರ ಎಂದು ಕರೆತೊಡಗಿದರು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಮಾರುಕಟ್ಟೆಯಲ್ಲಿ ವಜ್ರಗಳನ್ನು ಸೇರಿನ ಅಳತೆಯಲ್ಲಿ ಮಾರಾಟ ಮಾಡುತ್ತಿದ್ದರು.
- ಹಂಪಿಯು ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ
- ಇಲ್ಲಿನ ಪ್ರಮುಖ ಆಕರ್ಷಣೆಯ ದೇವಾಲಯಗಳು ಯಾವುದೆಂದರೆ ಹಂಪಿಯ ಕಮಲಮನೆ, ವಿರೂಪಾಕ್ಷ ದೇವಾಲಯ ಭವ್ಯವಾದ ವಿಠಲ ದೇವಸ್ಥಾನ ಮತ್ತು ಇತರೆ ಹಲವು ದೇವಾಲಯಗಳಿವೆ.
ಭೇಟಿ ಮಾಡಲು ಸೂಕ್ತ ಸಮಯ : ಅಕ್ಟೋಬರ್ ರಿಂದ ಫೆಬ್ರವರಿ ವರೆಗೆ ಹಂಪಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ವೀಕ್ಷಣೆಗೆ ಅನುಕೂಲ.
ಗೋಲ್ ಗುಂಬಜ್

ಗೋಲ್ ಗುಂಬಜ್ ಇದು ಕರ್ನಾಟಕದ ಬಿಜಾಪುರ ಜಿಲ್ಲೆ (ಈಗಿನ ವಿಜಯಪುರ ನಗರದಲ್ಲಿ ಇರುವ) ಪ್ರಸಿದ್ಧ ಸ್ಮಾರಕವಾಗಿದೆ. ಇದರಲ್ಲಿ ನಿರ್ಮಾಣವು ಕ್ರಿಸ್ತಶಕ 1626 ರಿಂದ ಕ್ರಿಸ್ತಶಕ 1656 ರಲ್ಲಿ ಈ ಸ್ಮಾರಕ ನಿರ್ಮಾಣವಾಯಿತು. ಗೋಲ್ ಗುಂಬಜ್ ಅನ್ನು ಪ್ರಸಿದ್ಧ ಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ಇವರಿಬ್ಬರೂ ನಿರ್ಮಿಸಿದ್ದಾರೆ.
ಗೋಲ್ ಗುಂಬಜ್ ಅಂದರೆ ಗೋಲಾಕಾರದ ಗುಮ್ಮಟ ಎಂದರ್ಥ ಇದನ್ನು ಮಹಮ್ಮದ್ ಆದಿಲ್ ಶಾ ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿಕೊಂಡನು. ಗೋಲ್ ಗುಂಬಜ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಗುಮ್ಮಟವಾಗಿದೆ. ಗೋಲ್ ಗುಂಬಜ್ ನಲ್ಲಿ ಒಂದು ಬಾರಿ ಹೇಳಿದ ಮಾತು ಪ್ರತಿಧ್ವನಿಯಾಗಿ 7 ಬಾರಿ ನಮಗೆ ಕೇಳಿಸುತ್ತದೆ.
- ಇದನ್ನು ಕರ್ನಾಟಕದ ತಾಜ್ಮಹಲ್ ಎಂದು ಸಹ ಕರೆಯುತ್ತಾರೆ. ಈ ಸ್ಮಾರಕವು ಇಸ್ಲಾಮಿಕ್ ಶೈಲಿಯನ್ನು ಪ್ರತಿನಿಧಿಸುತ್ತದೆ.
- ಈ ಸ್ಥಳಕ್ಕೆ ಭೇಟಿ ನೀಡಲು ಸರಿಯಾದ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಾಗಿದೆ.
ಗೊಮ್ಮಟೇಶ್ವರ (ಶ್ರವಣಬೆಳಗೊಳ)

ಗೊಮ್ಮಟೇಶ್ವರ ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ಜೈನರ ಧಾರ್ಮಿಕ ಕ್ಷೇತ್ರವಾಗಿದೆ ಇದು ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ಜೈನ ಧರ್ಮದ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಇದೆ. ಇದರ ನಿರ್ಮಾಣವು ಕ್ರಿಸ್ತಶಕ 981 ರಲ್ಲಿ ಗಂಗ ರಾಜ್ಯದ ಮಂತ್ರಿಯಾದ ಚಾವುಂಡರಾಯ ಇದನ್ನು ನಿರ್ಮಿಸಿದನು.
ಗೊಮ್ಮಟೇಶ್ವರದ ಎತ್ತರ 58 ಅಡಿ ಯ ಏಕಶಿಲಾ ಮೂರ್ತಿಯಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ಮಾಡುತ್ತಾರೆ. ಮುಂದೆ 2030 ನೇ ವರ್ಷದಲ್ಲಿ ಮಹಾಮಸ್ತಭಿಷೇಕ ನಡೆಯುತ್ತದೆ. ಈ ಗೊಮ್ಮಟೇಶ್ವರ ಪ್ರತಿಮೆ ವಿಂಧ್ಯಗಿರಿ ಬೆಟ್ಟದ ಮೇಲೆ ನೆಲೆಸಿದೆ.
- ಇದನ್ನು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ.
- ಈ ಪ್ರತಿಮೆ ಪ್ರಪಂಚದ ಜನರನ್ನು ತನ್ನ ಕಡೆ ಸೆಳೆಯುತ್ತದೆ. ಗೊಮ್ಮಟೇಶ್ವರ ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಒಂದಾಗಿದೆ.
ಮೈಸೂರು ಅರಮನೆ

ಕರ್ನಾಟಕದಲ್ಲಿ ಹಲವು ಅರೆಮನೆ ಗಳಿವೆ ಆದರೆ ನಮ್ಮ ಮೈಸೂರು ಅರಮನೆ ನಮ್ಮ ರಾಜ್ಯದ ಐತಿಹಾಸಿಕ ,ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಬಗ್ಗೆ ಹೆಗ್ಗಳಿಕೆಯನ್ನು ಪ್ರತಿಬಿಂಬಿಸುತ್ತದೆ.
ಮೈಸೂರು ನಗರದ ಹೃದಯವಾಗಿರುವ ಈ ಅರಮನೆಯು ವಿಶ್ವಪ್ರಸಿದ್ಧ ಆಕರ್ಷಣೆಯ ತಾಣವಾಗಿದೆ ಮತ್ತು ಮೈಸೂರು ಅರಮನೆಯನ್ನು “ಅಂಬಾ ವಿಲಾಸ್” ಎಂದು ಸಹ ಕರೆಯುತ್ತಾರೆ. ಇದು ದೇಶದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ ಈ ಅರಮನೆಯನ್ನು “ಇಂಡೋ-ಸಾರ್ಸೆನಿಕ್” ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ಅರಮನೆಯು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿತ್ತು.ಈ ಅರಮನೆ ರಾತ್ರಿಯ ಬೆಳಕಿನಲ್ಲಿ ಕಣ್ಣಿಗೆ ತೊಟ್ಟುವಂತೆ ಕಾಣುತ್ತದೆ.
- ಈ ಅರಮನೆಯು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ.
- ಭೇಟಿ ನೀಡುವ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ವರೆಗೆ ಇರುತ್ತದೆ.
- ಅರಮನೆಯಲ್ಲಿ ಕ್ಯಾಮರಾಗಳಿಗೆ ಅನುಮತಿ ಕೊಟ್ಟರೆ ಫೋಟೋ ತೆಗೆಯುವುದನ್ನು ಮರೆಯಬೇಡಿ.
- ಮೈಸೂರು ಅರಮನೆ ಇತಿಹಾಸ ತಿಳಿಯಲು ಅಲ್ಲಿನ ಗೈಡ್ಸ್ ಗಳ ಜೊತೆ ಹೋಗೋದು ಉತ್ತಮ.
- ಇದರ ಹತ್ತಿರವೇ ಉಳಿದುಕೊಳ್ಳಲು ಹೋಟೆಲ್ ಗಳು ಮತ್ತು ಊಟ ಮಾಡುವುದಕ್ಕೆ ಖಾನಾವಳಿಗಳಿವೆ.
- ಒಂದು ಬಾರಿ ಈ ಅರಮನೆಯನ್ನು ಭೇಟಿ ಮಾಡುವುದರಿಂದ ನಮಗೆ ನಮ್ಮ ರಾಜ್ಯದ ವೈಭವವನ್ನು ಕಾಣುತ್ತೇವೆ.
ಜೋಗ ಜಲಪಾತ

ಕರ್ನಾಟಕದ 7 ಅದ್ಭುತಗಳು ಇದರಲ್ಲಿ ಜೋಗ ಜಲಪಾತ ಒಂದಾಗಿದೆ. ಜೋಗ ಜಲಪಾತ ಭಾರತದ ಎರಡನೇ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಜಲಪಾತ ಭಾರತದ ಪ್ರಕೃತಿ ಸೌಂದರ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಜನರು ಈ ಜಲಪಾತವನ್ನು “ಗೇರುಸೊಪ್ಪಿನ ಜಲಪಾತ” ಅಥವಾ “ಜೋಗದ ಗುಡ್ಡೆ” ಎಂದು ಸಹ ಕರೆಯುತ್ತಾರೆ.
ಈ ಜಲಪಾತದ ವೈಶಿಷ್ಟತೆ
- ಈ ಜಲಪಾತವನ್ನು ಶರಾವತಿ ನದಿ ರಚನೆ ಮಾಡಿದೆ ಈ ಜಲಪಾತ 830 ಅಡಿ ಎತ್ತರದಲ್ಲಿ ನಾಲ್ಕು ಭಾಗವಾಗಿ ನೀರನ್ನು ಬೀಳಿಸುತ್ತದೆ.
- ರಾಜಾ -ನೇರವಾಗಿ ಬೀಳುವ ಮುಖ್ಯ ಧಾರೆ
- ರಾಣಿ – ಸುಂದರವಾಗಿ ಹರಿಯುವ ಧಾರೆ
- ರೋರರ್ – ಹೆಚ್ಚು ಶಬ್ದ ಮಾಡಿ ಹರಿಯುವ ಧಾರೆ
- ರಾಕೇಟ್ – ವೇಗವಾಗಿ ಹರಿಯುವ ಧಾರೆ
- ಮಳೆಗಾಲದಲ್ಲಿ ಇದು ಒಂದಾಗಿ ಕೂಡಿ ಹರಿಯುವ ದೃಶ್ಯ ಎಲ್ಲರ ಕಣ್ಣು ಕಂಗೊಳಿಸುತ್ತದೆ.
ಹತ್ತಿರದ ಪ್ರವಾಸಿ ತಾಣಗಳು
- ಸಾಗರ ಪಟ್ಟಣ
- ಹೊನ್ನಾವರ
- ಶಿವಮೊಗ್ಗ ನೈಸರ್ಗಿಕ ಉದ್ಯಾನವನ
- ಲಿಂಗನಮಕ್ಕಿ ಅಣೆಕಟ್ಟು
- ಕೊಡಚಾದ್ರಿ ಬೆಟ್ಟ
ಸಲಹೆಗಳು
- ಮಳೆಗಾಲದಲ್ಲಿ ಸುರಕ್ಷಿತವಾಗಿ ಹೋಗಿ ಮತ್ತು ಕಂದಕ ಬಳಿ ಹೋಗಬೇಡಿ
- ಬೆಳ್ಳಂ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಜಲಪಾತ ಆಕರ್ಷಕವಾಗಿ ಕಾಣುತ್ತದೆ.
- ಫೋಟೋಶೂಟ್ ಗೆ ಕ್ಯಾಮೆರಾ ತೆಗೆದುಕೊಂಡು ಹೋಗೋದು ಮರೆಯಬೇಡಿ.
- ಊಟಕ್ಕೆ ಹತ್ತಿರದಲ್ಲಿರುವ ಅಕ್ಕಿ ರೊಟ್ಟಿ ಮತ್ತು ನೀರ್ ದೋಸೆ ತುಂಬ ರುಚಿ ಇರುತ್ತದೆ ಮರೆಯಬೇಡಿ.
ನೇತ್ರಾಣಿ ದ್ವೀಪ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸಮೀಪದಲ್ಲಿ ಈ ನೇತ್ರಾವತಿ ದ್ವೀಪ ಇದೆ. ಇದ್ವಪವನ್ನು “ಪಿಜನ್ ಐಲ್ಯಾಂಡ್” ( ಪಾರಿವಾಳಗಳ ದ್ವೀಪ ) ಎಂದು ಕರೆಯುತ್ತಾರೆ.
ಭಾರತದಲ್ಲಿ ಈ ದ್ವೀಪವು ಸ್ಕೊಬಾ ಡೈವಿಂಗೆ ಸರಿಯಾದ ಸ್ಥಳವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ನೇತ್ರಾಣಿ ದ್ವೀಪವು ಎರಡನೆಯ ಸ್ಥಾನದಲ್ಲಿದೆ. ಇದು ನೀಲಿ ಸಮುದ್ರದ ಮಧ್ಯಭಾಗದಲ್ಲಿ ಕಣ್ಣಿನ ಆಕರದಲ್ಲಿ ಇರುವುದರಿಂದ ಇದನ್ನು ನೇತ್ರಾಣಿ ದ್ವೀಪ ಎಂದು ಕರೆಯಲಾಗಿದೆ.
- ಇಲ್ಲಿ ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡಬಹುದು
- ಬೋಟ್ ರೈಡಿಂಗ್ ಮಾಡಬಹುದು
- ನೀರಿನ ಒಳಗೆ ವಿವಿಧ ಬಣ್ಣದ ರೀತಿಯ ಮೀನುಗಳನ್ನು ಕಾಣಬಹುದು
- ಈ ದ್ವಿಪದ ವಿಸ್ತೀರ್ಣ 500 ಮೀಟರ್ ಇದೆ
ಭೇಟಿ ಮಾಡಲು ಸೂಕ್ತ ಸಮಯ
ನೇತ್ರಾಣಿ ದ್ವೀಪಕ್ಕೆ ಭೇಟಿ ಮಾಡುವ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಉತ್ತಮ.ಮಳೆಗಾಲದಲ್ಲಿ ಅಂದರೆ ಜೂನ್ ಇಂದ ಸೆಪ್ಟೆಂಬರ್ ವರೆಗೆ ಈ ದ್ವಿಪಕ್ಕೆ ಪ್ರಯಾಣ ಮಾಡುವುದು ನಿಧಿಸುತ್ತಾರೆ ಏಕೆಂದರೆ ಸಮುದ್ರದ ಅಲೆಗಳು ಹೆಚ್ಚು ಆಗುವುದರಿಂದ
ಸಲಹೆ
- ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಬೇಕು.
- ಪ್ರವಾಸಿಗಳು ಸುರಕ್ಷಿತ ಸಲಕರಣೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
- ಊಟಕ್ಕೆ ಆಹಾರ ಮತ್ತು ನೀರನ್ನು ಮುರುಡೇಶ್ವರ ದಲ್ಲೇ ಸಿದ್ದ ಮಾಡಿಕೊಂಡು ಹೋಗಬೇಕು ಏಕೆಂದರೆ ನೇತ್ರಾಣಿ ದ್ವೀಪದಲ್ಲಿ ಯಾವುದೇ ಸೌಲಭ್ಯಗಳಿಲ್ಲ.
- ಫೋಟೋ ತೆಗೆದುಕೊಳ್ಳುವವರು ಮೊಬೈಲ್ ಗಳಿಗೆ ಮರೆಯದೆ ವಾಟರ್ ಪ್ರೂಫ್ ಕವರ್ ಗಳನ್ನು ಹಾಕಿಕೊಳ್ಳಬೇಕು
ಈ Blog ನಲ್ಲಿ ನಮ್ಮ ಕರ್ನಾಟಕದ ಏಳು ಅದ್ಭುತಗಳನ್ನು ನೀವು ತಿಳಿದುಕೊಂಡಿದ್ದೀರಾ ಹಾಗೆಯೇ ನಮ್ಮ ಪ್ರಪಂಚದ ಏಳು ಅದ್ಭುತಗಳನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಲಿಂಕ್ ಅನ್ನು ಒತ್ತಿರಿ.
RECENT POST
- ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ
- Kannada Gk Questions With Answers
- Top 50 Gk question and answers in kannada
- ಮಹಾತ್ಮ ಗಾಂಧೀಜಿ
- ಪ್ರಪಂಚದ ಏಳು ಅದ್ಭುತಗಳು
ಕರ್ನಾಟಕದ ರಾಜಧಾನಿ ಯಾವುದು
ಬೆಂಗಳೂರು
ಮೈಸೂರು ಅರಮನೆ ಎಲ್ಲಿದೆ
ಮೈಸೂರು
ಜೋಗ ಜಲಪಾತ ಯಾವ ಜಿಲ್ಲೆಯಲ್ಲಿ ಇದೆ
ಶಿವಮೊಗ್ಗ
ಗೋಲ್ಗುಮ್ಮಟ ಎಲ್ಲಿದೆ
ವಿಜಯಪುರ
ಹಂಪಿ ಎಲ್ಲಿದೆ
BALLARI
ಕರ್ನಾಟಕದ ಅತ್ಯುನ್ನತ ಜಲಪಾತ ಯಾವದು
ಜೋಗ
ಗೋಲ್ಗುಮ್ಮಟ ಯಾರ ಸಮಾಧಿ
ಮೊಹಮ್ಮದ್ ಆದಿಲ್ ಶಾಹ್
ಕರ್ನಾಟಕದ ಅತ್ಯಂತ ಹಳೆಯ ರಾಜವಂಶ
ಚಾಲುಕ್ಯ
ಜೋಗ ಜಲಪಾತದ ನದಿ ಯಾವದು
ಶರಾವತಿ
ಹಂಪಿಯ ಪ್ರಸಿದ್ಧ ದೇವಾಲಯ
ವಿರೂಪಾಕ್ಷ ದೇವಾಲಯ
ಮೈಸೂರು ಅರಮನೆಯನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ
ಇಂಡೋ-ಸಾರ್ಸೆನಿಕ್
ಜೋಗ ಜಲಪಾತ ಯಾವ ನದಿಯಲ್ಲಿದೆ
ಶರಾವತಿ

5 thoughts on “ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು”